ನಿಜ , ಸುವರ್ಣ ಟಿವಿಯ ಪ್ಯಾಟೆ ಮಂದಿ ಕಾಡಿಗ್ಬಂದ್ರು ಶೋ ನೋಡಿದಾಗ ಹೀಗೆ ಅನ್ಸಿದ್ದು ಸುಳ್ಳಲ್ಲ .
ಯೆಲ್ಲಾಪುರದ ಕೆಲಾಸೆಯಲ್ಲಿ ನಡೆಯುತ್ತಿರುವ ಈ ಶೋ ಈಗಾಗಲೇ ಪರಿಸರ ಪ್ರಿಯರ ಅವಕೃಪೆಗೆ ಒಳಗಾಗಿ ಕಾಡಿನಿಂದ ಆಚೆಗೆ ಮಾಲಕಿ ಬೆಟ್ಟದಲ್ಲಿ ನಡೆಯುತ್ತಿದೆ. { ಹಾಗಂತ ಸಿರಸಿಯ ಲೋಕಧ್ವನಿ ಪತ್ರಿಕೆ ವರದಿ ಮಾಡಿದೆ } ಈ ಶೋ ಈಗ ಅಸಹ್ಯದ ಪರಮಾವಧಿ ತಲುಪಿದೆ . ಅಕುಲ್ ಬಾಲಾಜಿ ಎಂಬ ಶಾರ್ಟ್ ಟೆಂಪೆರ್ ನಡೆಸಿಕೊಡುವ ಶೋ ಕಾಡಿನ ಜೀವನದ ಬಗ್ಗೆ ಜನರಲ್ಲಿ ಅರಿವುಮೂಡಿಸುವುದಾಗಿ ಬೊಗಳೆ ಬಿಡುತ್ತ ಒಂದಷ್ಟು ಹುಡುಗ ಹುಡುಗಿಯರನ್ನು ಹೊಟ್ಟೆಗೆ ಊಟವನ್ನು ನೀಡದೆ ಪುಕ್ಕಟೆ ಮಜಾ ತೆಗೆದುಕೊಳ್ತಾ ಇರೋದು ಸುಳ್ಳಲ್ಲ . ಒಂದೇ ಬಟ್ಟೆಯಲ್ಲಿ ಹನ್ನೆರಡು ದಿನ ಕಳೆದ ಅವರೆಲ್ಲ ಇನ್ಫ್ಯಕ್ಟೆನ್ಆಗಿದೆಯೆಂದು ಬೊಬ್ಬೆ ಹೊಡಿತ ಇದ್ದರೆ ಅವ್ರ ಗೋಳುಕೆಳುವವ್ರು ಯಾರು ಇರ್ಲಿಲ್ಲ . ಆರಂಭದ ೩ ದಿನ ಕೇವಲ ಗೆನಸುತಿನ್ನುತ್ತ ಬದುಕಿದ ಇವರಿಗೆ ಇನ್ನು ಸರಿಯಾದ ಆಹಾರ ಲಭಿಸದೆ ಇರುವುದು ಈ ರಿಯಾಲಿಟಿ ಶೋ ಸಾಗುತ್ತಿರುವ ದಾರಿ ತೋರಿಸ್ತಾ ಇದೆ ಅಂದ್ರೆ ತಪ್ಪಲ್ಲ. ಟಾಸ್ಕ್ ಹೆಸರಲ್ಲಿ ಸ್ಪರ್ಧಿಗಳ ಮಧ್ಯೆ ಕಿತ್ತಾಟ ತಂದು ರಿಯಾಲಿಟಿ ಶೋ ಅಂದ್ರೆ ಜನ ಅಸಹ್ಯ ಪಡುವ ರೀತಿ ಮಾಡಿರುವುದು ಇದುವರೆಗಿನ ಈ ಶೋ ಸಾಧನೆ ಅನ್ನಬಹುದು. ಈಗಾಗಲೇ ಹಳ್ಳಿ ಮುಗ್ಧರನ್ನ ಪಟ್ಟಣಕ್ಕೆ ಕರೆತಂದು ಅವರನ್ನು ಏನಕ್ಕೂ ಲಾಯಕ್ಕಿಲ್ಲದವರು ಎಂದು ಬಿಂಬಿಸಿದ ಈ ವಾಹಿನಿ ಈ ಕಾರ್ಯಕ್ರಮದ ಮೂಲಕ ಎನನ್ನು ಸಾಧಿಸ ಹೊರಟಿದೆಯೋ ನಿಜಕ್ಕೂ ಅರ್ಥವಾಗುತ್ತಿಲ್ಲ . ಸುವರ್ಣ ನ್ಯೂಸ್ ನಂಥ ಉತ್ತಮ ವಾಹಿನಿಯ ಸೋದರ ಸಂಸ್ಥೆಯೊಂದು ಇಂಥಹ ಅಸಹ್ಯಕರ ಶೋ ನಡೆಸುತ್ತಿರುವುದು ನಿಜಕ್ಕೂ ಉತ್ತಮ ಬೆಳವಣಿಗೆಯಲ್ಲ .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ