ಶುಕ್ರವಾರ, ಜೂನ್ 3, 2011

ಹಸಿರು ಸ್ವಾಮೀಜಿಗೆ ಪರಿಸರ ಪ್ರಶಸ್ತಿ

ಸ್ವರ್ಣವಲ್ಲಿ ಪರಮಪೂಜ್ಯ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಯವರಿಗೆ  ರಾಜ್ಯ ಸರಕಾರ  ಪ್ರತಿಷ್ಟಿತ  ಪರಿಸರ  ಪ್ರಶಸ್ತಿ  ಪ್ರಕಟಿಸಿದೆ .  ಹಸಿರು ಸ್ವಾಮೀಜಿಯೆಂದೆ  ಪ್ರಸಿದ್ದರಾಗಿರುವ  ನಮ್ಮ  ಗುರುಗಳಿಗೆ   ನೀಡುವ  ಈ  ಪ್ರಶಸ್ತಿಯಿಂದ  ಅದರ   ಗೌರವ  ಇನ್ನಷ್ಟು ಹೆಚ್ಚಿದೆ ಅಂದರೆ   ತಪ್ಪಲ್ಲ .


ಉತ್ತರ ಕನ್ನಡದ  ಜನರ   ಜೀವನಾಡಿಯಾದ   ಪರಿಸರದ  ಮೇಲೆ ನಡೆಯುತ್ತಿರುವ   ನಿರಂತರ  ದೌರ್ಜನ್ಯದ   ಮಧ್ಯೆಯೂ  ಜನ  ಇಂದು ನೆಮ್ಮದಿಯಂದ  ಬದುಕು ನಡೆಸುತ್ತ ಇದ್ದಾರೆ  ಅಂದರೆ  ಅದಕ್ಕೆ ಕಾರಣ  ನಮ್ಮ  ಸ್ವಾಮೀಜಿ . ಅವರ  ಪರಿಸರ  ಹೋರಾಟಗಳೇ  ಹಾಗೆ  .  ಇಡೀ ದೇಶಮಟ್ಟದ  ಪರಿಸರ  ಹೋರಾಟಗಳಿಗೆ  ಇಂದು  ನಮ್ಮ ಸ್ವಾಮೀಜಿ  ಮಾರ್ಗದರ್ಶಕರು  ಅಂದರೆ   ಅವರ  ಪರಿಸರ  ಹಾಗು  ಶಿಷ್ಯರೆಡೆಗಿನ  ಅನನ್ಯ  ಕಾಳಜಿ  ಎಂಥದು  ನೀವೇ ಯೋಚಿಸಿ .

ಅದು  ಬೇಡ್ತಿ ಅಘನಾಶಿನಿ  , ನದಿತಿರುವೂ  ಯೋಜನೆ   ಯಾವುದೇ   ಇರಲಿ   ಶಿಷ್ಯರ   ಸಹಾಯಕ್ಕೆ   ಸ್ವಾಮೀಜಿ  ಸದಾ   ಅಲ್ಲಿ  ಹಾಜರ್ .  ಬೇಡ್ತಿ  ಹೋರಾಟದ   ಪಾದಯಾತ್ರೆ  ಸಂದರ್ಭದಲ್ಲಿ   ಕಾಲಿಗೆ  ಬೊಕ್ಕೆ ಬಂದರು  ಪಾದುಕೆ  ಧರಿಸದ  ಅಪ್ಪಟ   ಹೋರಾಟಗಾರ .  ಆದ್ದರಿಂದಲೇ   ಅವರ  ಹೆಸರಿನ ಹಿಂದೆ  "ಹಸಿರು ಸ್ವಾಮೀಜಿ"  ಎಂಬ  ಪ್ರೀತಿಯ   ಕೂಗು  . ಪ್ರಚಾರ   ಪ್ರಿಯರಾಗದೆ   ತಮ್ಮ ಕೆಲಸಗಳಿಂದಲೇ   ಪ್ರಸಿದ್ದರಾದವರು   ನಮ್ಮ  ಸ್ವಾಮೀಜಿ .
ಎಂದೋ   ಬರಬೇಕಿದ್ದ   ಈ  ಗೌರವ  ಸರಕಾರದಿಂದ  ಈಗ  ಬಂದಿದೆ .  ಜೂನ್   ೫  ರಂದು  ಬೆಂಗಳೂರು  ಸೆಂಟ್ರಲ್ ಕಾಲೇಜಿನಲ್ಲಿ
ನಡೆಯುವ   ಸಮಾರಂಭದಲ್ಲಿ   ಮುಖ್ಯಮಂತ್ರಿಗಳು   ಶ್ರೀಗಳನ್ನ ಗೌರವಿಸಿ  ಆಶಿರ್ವಾದ   ಪಡೆಯಲಿದ್ದಾರೆ .


ಬುಧವಾರ, ನವೆಂಬರ್ 24, 2010

ರಿಯಾಲಿಟಿ ಶೋ ಎಂಬ ಅಸಹ್ಯ

ನಿಜ , ಸುವರ್ಣ ಟಿವಿಯ ಪ್ಯಾಟೆ ಮಂದಿ ಕಾಡಿಗ್ಬಂದ್ರು ಶೋ ನೋಡಿದಾಗ ಹೀಗೆ ಅನ್ಸಿದ್ದು ಸುಳ್ಳಲ್ಲ .
ಯೆಲ್ಲಾಪುರದ ಕೆಲಾಸೆಯಲ್ಲಿ ನಡೆಯುತ್ತಿರುವ ಈ ಶೋ ಈಗಾಗಲೇ ಪರಿಸರ ಪ್ರಿಯರ ಅವಕೃಪೆಗೆ ಒಳಗಾಗಿ ಕಾಡಿನಿಂದ ಆಚೆಗೆ ಮಾಲಕಿ ಬೆಟ್ಟದಲ್ಲಿ ನಡೆಯುತ್ತಿದೆ. { ಹಾಗಂತ ಸಿರಸಿಯ ಲೋಕಧ್ವನಿ ಪತ್ರಿಕೆ ವರದಿ ಮಾಡಿದೆ } ಈ ಶೋ ಈಗ ಅಸಹ್ಯದ ಪರಮಾವಧಿ ತಲುಪಿದೆ . ಅಕುಲ್ ಬಾಲಾಜಿ ಎಂಬ ಶಾರ್ಟ್ ಟೆಂಪೆರ್ ನಡೆಸಿಕೊಡುವ ಶೋ ಕಾಡಿನ ಜೀವನದ ಬಗ್ಗೆ ಜನರಲ್ಲಿ ಅರಿವುಮೂಡಿಸುವುದಾಗಿ ಬೊಗಳೆ ಬಿಡುತ್ತ ಒಂದಷ್ಟು ಹುಡುಗ ಹುಡುಗಿಯರನ್ನು ಹೊಟ್ಟೆಗೆ ಊಟವನ್ನು ನೀಡದೆ ಪುಕ್ಕಟೆ ಮಜಾ ತೆಗೆದುಕೊಳ್ತಾ ಇರೋದು ಸುಳ್ಳಲ್ಲ . ಒಂದೇ ಬಟ್ಟೆಯಲ್ಲಿ ಹನ್ನೆರಡು ದಿನ ಕಳೆದ ಅವರೆಲ್ಲ ಇನ್ಫ್ಯಕ್ಟೆನ್ಆಗಿದೆಯೆಂದು ಬೊಬ್ಬೆ ಹೊಡಿತ ಇದ್ದರೆ ಅವ್ರ ಗೋಳುಕೆಳುವವ್ರು ಯಾರು ಇರ್ಲಿಲ್ಲ . ಆರಂಭದ ೩ ದಿನ ಕೇವಲ ಗೆನಸುತಿನ್ನುತ್ತ ಬದುಕಿದ ಇವರಿಗೆ ಇನ್ನು ಸರಿಯಾದ ಆಹಾರ ಲಭಿಸದೆ ಇರುವುದು ಈ ರಿಯಾಲಿಟಿ ಶೋ ಸಾಗುತ್ತಿರುವ ದಾರಿ ತೋರಿಸ್ತಾ ಇದೆ ಅಂದ್ರೆ ತಪ್ಪಲ್ಲ. ಟಾಸ್ಕ್ ಹೆಸರಲ್ಲಿ ಸ್ಪರ್ಧಿಗಳ ಮಧ್ಯೆ ಕಿತ್ತಾಟ ತಂದು ರಿಯಾಲಿಟಿ ಶೋ ಅಂದ್ರೆ ಜನ ಅಸಹ್ಯ ಪಡುವ ರೀತಿ ಮಾಡಿರುವುದು ಇದುವರೆಗಿನ ಈ ಶೋ ಸಾಧನೆ ಅನ್ನಬಹುದು. ಈಗಾಗಲೇ ಹಳ್ಳಿ ಮುಗ್ಧರನ್ನ ಪಟ್ಟಣಕ್ಕೆ ಕರೆತಂದು ಅವರನ್ನು ಏನಕ್ಕೂ ಲಾಯಕ್ಕಿಲ್ಲದವರು ಎಂದು ಬಿಂಬಿಸಿದ ಈ ವಾಹಿನಿ ಈ ಕಾರ್ಯಕ್ರಮದ ಮೂಲಕ ಎನನ್ನು ಸಾಧಿಸ ಹೊರಟಿದೆಯೋ ನಿಜಕ್ಕೂ ಅರ್ಥವಾಗುತ್ತಿಲ್ಲ . ಸುವರ್ಣ ನ್ಯೂಸ್ ನಂಥ ಉತ್ತಮ ವಾಹಿನಿಯ ಸೋದರ ಸಂಸ್ಥೆಯೊಂದು ಇಂಥಹ ಅಸಹ್ಯಕರ ಶೋ ನಡೆಸುತ್ತಿರುವುದು ನಿಜಕ್ಕೂ ಉತ್ತಮ ಬೆಳವಣಿಗೆಯಲ್ಲ .

ನಮಸ್ಕಾರ

ಎಲ್ಲರಿಗೂ ನಮಸ್ಕಾರ .
ನಾನು ಶ್ರೀರಾಮ್ ಭಟ್ ಮಲೆನಾಡ ಸಿರ್ಸಿಯವನು . ಬೆಂಗಳೂರಿನಲ್ಲಿ ವಾಸ .
ಹಲವರ ಬ್ಲಾಗ್ ನೋಡ್ತಾ ನಾನೂ ಬ್ಲಾಗ್ ಬರೆಯುವುದಕ್ಕೆ ಆರಂಭಿಸಿದ್ದೇನೆ .
ಹಲವು ವರ್ಷಗಳ ನಂತರ ಮತ್ತೆ ಬರವಣಿಗೆ ಆರಂಭಿಸಿದ್ದೇನೆ .
ತಮ್ಮೆಲ್ಲರ ಪ್ರೋತ್ಸಾಹ ಇರಲಿ .
ವಂದನೆಗಳು ,
ಶ್ರೀರಾಮ್ ಭಟ್ .